https://my.trip.com/travel-guide/attraction/uttara-kannada/sodhe-sri-vadiraja-matha-58287302?curr=EUR&locale=ms-MY
KeseluruhanberdekatanUlasanWin PrizesButiran

Sodhe Sri Vadiraja Matha (Sonda)

󰺂3.2
5/5
1 Ulasan
berdasarkan pada 34 ulasan
Tempat Ibadat LainKuil
Buka Dibuka pada 5:00-13:30,15:00-20:00
Alamat:
PQMH+VF8, Rd to Sonda Vadiraja Matha, Mathadaval, Karnataka 581336, IndiaPeta
Nombor telefon+91 94833 57005
Ulasan pelancong:

ಸೊಂದೆ ಶ್ರೀ ವಾಧೀರಾಜ ಸಾರ್ವಭೌಮರ ಮಠ ಮಹಿಮೆಯ ನೆಲೆ ಇರುವನಂತಹ ಶ್ರೀಕ್ಷೇತ್ರ. ಭಕ್ತ ರಕ್ಷಕ, ಕ್ಷೇತ್ರ ರಕ್ಷಕ ಶ್ರೀ ಭೂತರಾಜರು ನೆಲೆಸಿರುವ ಮಹಾ ಕ್ಷೇತ್ರ. ಕರ್ನಾಟಕದ ದೇವರ ನಾಡದ ಉತ್ತರ ಕನ್ನಡ ಜಿಲ್ಲೆಯ ಸೊಂದೆಯು ಬೆಂಗಳೂರಿನಿಂದ 419 ಕಿ. ಮೀ ನಷ್ಟು ದೂರದ ಪ್ರಯಾಣ ಹೊಂದಿದು, ಸಿರ್ಸಿಯಿಂದ ಶ್ರೀಕ್ಷೇತ್ರ 18.2 ಕಿ. ಮೀ ದೂರದಲ್ಲಿದೆ. ಶ್ರೀಕ್ಷೇತ್ರದ ಮಹಾದ್ವಾರದಿಂದಲೇ ರಾಮತ್ರಿವಿಕ್ರಮ ಸ್ವಾಮಿಯ ದೇವಾಲಯವು ಹಾಗೂ ತಂಗು ದಾಣವಾದ ರಾಜಧಾಮ ಮತ್ತು ತ್ರಿವಿಕ್ರಮಧಾಮ ಕಾಣಸಿಗುತ್ತದೆ. ಕಟ್ಟಡದ ಬಲಭಾಗದ ಮೊದಲನೆಯ ಕೊಟ್ಟಡಿಯು office room ಆಗಿದ್ದು ಭಕ್ತಾಧಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮುಂಗಡ ಹಣವನ್ನು ಪಾವತಿಸಿ ರೂಮ್ ಬುಕ್ ಮಾಡಿ ಕೊಳ್ಳಬಹುದಾಗಿದೆ.ರೂಮ್ ಅವಶ್ಯಕತೆ ಇಲ್ಲದವರು ಅಥವಾ ರೂಮ್ ಸಿಗದವರಿಗೆ ತಮ್ಮ ಲಗೇಜ್ ಇಡಲು ಸಣ್ಣ ಕಪ್ಬೋರ್ಡ್ ವ್ಯವಸ್ಥೆ ಇದ್ದು ಅಲ್ಲೇ ವಿಶ್ರಾಂತಿ ಪಡೆಯಲು ವಿಶಾಲವಾದ ಸ್ಥಳವಕಾಶವಿದೆ. ದೇವಾಲಯದಲ್ಲಿ ಬೆಳ್ಳಗ್ಗೆ 5-30ರ ಸಮಯದಿಂದಲೇ ಪೂಜಾ ಕಾರ್ಯ ಆರಂಭವಾಗುತ್ತದೆ. ಭಕ್ತಾಧಿಗಳು ಸೇವಾ ಕಚೇರಿಯಲ್ಲಿ ತಮಗೆ ಬೇಕಾದ ಸೇವಾ ಚೀಟಿವನ್ನು (ಕುಂಕುಮಾರ್ಚನೆ, ತುಲಭಾರ, ಭೂತರಾಜರ ವಿಶೇಷ ರಾತ್ರಿ ಪೂಜೆ, ಇತ್ಯಾದಿ) ಮುಂಗಡವಾಗಿ ಪಡೆಯಬೇಕು.ಮೊದಲಿಗೆ ಹೋಗುವ ಭಕ್ತಾಧಿಗಳು ಮುಖ್ಯವಾಗಿ ತಿಳಿಯಬೇಕಾದ ವಿಷಯವೆಂದರೆ ಶ್ರೀ ಭೂತರಾಜರಿಗೆ ತೆಂಗಿನಕಾಯಿಯ ಅರ್ಪಣೆ (ತೆಂಗಿನ ಕಾಯಿ ಉರಳಿಸುಹುದು) ಅಂದರೆ ಸೇವಾ ಕಚೇರಿಯಲ್ಲಿ ಅಥವಾ ಅಂಗಡಿಯಲ್ಲಿ ಅಥವಾ ಬೃಂದಾವನದಲ್ಲಿ ಒಬ್ಬ ವ್ಯಕ್ತಿಗೆ ಒಂದು ಕಾಯಿಯಂತೆ ಖರೀದಿಸಿ ಶ್ರೀ ಭೂತರಾಜರ ಗುಡಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿ ಭೂತರಾಜರ ಪಾದಕ್ಕೆ ಉರಳಿಸಬೇಕಾಗುತ್ತದೆ (ಇದು ಅತೀ ಮುಖ್ಯ ಹಾಗೂ ಕಡ್ಡಾಯದ ಆಚರಣೆಯಾಗಿದೆ) ಭಕ್ತಾದಿಗಳು ಸ್ವಂತ ವಾಹನದಲ್ಲಿ ಬಂದಿದ್ದರೆ ವಾಹನದ ಸಲುವಾಗಿಯೂ ತೆಂಗಿನಕಾಯಿಯನ್ನು ಶ್ರೀ ಭೂತರಾಜರಿಗೆ ಅರ್ಪಿಸಬೇಕು. ಅರ್ಪಣೆಯ ನಂತರ ಬೃಂದಾವನದ ಹಿಂಭಾಗದಲ್ಲಿನ ಕಲ್ಯಾಣಿಯಲ್ಲಿ ಮಿಂದು ಪಂಚೆ ಮತ್ತು ಶಲ್ಯವನ್ನು ಧರಿಸಿ ರಾಮತ್ರಿವಿಕ್ರಮ ಸ್ವಾಮಿಯ ದೇವಾಲಯಕ್ಕೆ ಬಂದು ದೇವರ ದರುಶನದೊಂದಿಗೆ ಕುಂಕುಮಾರ್ಚನೆ ಮಾಡಿಸಿದ ಬಳಿಕ ಬೃಂದಾವನವನ್ನು ಪ್ರವೇಶಿಸಿ ಶ್ರೀ ವಾಧೀರಾಜ ಸಾರ್ವಭೌಮರ ದರುಶನ ಪಡೆಯಬೇಕು. ಶ್ರೀಗಳ ಹಾಗೂ ಭೂತರಾಜರ ಪೂಜೆಯಲ್ಲಿ ಪಾಲ್ಗೊಂಡು ತೀರ್ಥ ಸ್ವೀಕರಿಸಿದ ನಂತರ ಭೋಜನಕ್ಕೆ ಕಳುಹಿಸಿ ಕೊಡಲಾಗುತ್ತದೆ. ವಿಶೇಷವೆಂದರೆ ಸಂಜೆ ವೇಳೆಯಲ್ಲಿ ಶ್ರೀ ಭೂತರಾಜರ ವಿಶೇಷ ರಾತ್ರಿ ಪೂಜೆ ಮಾಡಿ ತೀರ್ಥ ಪ್ರಸಾದ ಕೊಟ್ಟು ನಂತರ ಭೋಜನಕ್ಕೆ ಕಳುಹಿಸಿ ಕೊಡಲಾಗುತ್ತದೆ. ಮೊದಲ ಸಲ ಹೋದ ನನಗೆ, ಜೊತೆ ಇದ್ದು ಇಷ್ಟನ್ನು ತಿಳಿಸಿದ್ದು ಗೆಳೆಯ ಸುಬ್ರಮಣ್ಯ ಸತ್ತಿಗೆರೆ (ಹುಬ್ಬಳ್ಳಿ). ಈ ಮೂಲಕ ಅವರಿಗೆ ಕೃತಜ್ಞತೆಳು.

More

Cadangan Berhampiran Sodhe Sri Vadiraja Matha (Sonda)

Ulasan Sodhe Sri Vadiraja Matha (Sonda): Petua Setempat dan Pengalaman Daripada Pelawat

Sesetengah ulasan mungkin telah diterjemahkan oleh Google Translate
Trip.com(1 Ulasan)Trip.com
TripAdvisor(34 Ulasan)TripAdvisor

Maklumat Tambahan